Donation
Campainer Aadhar / Pan

Patient Pan/Addhar

Certificate

Proof Image

Patient Photo

DONATE FOR PATIENT
Title
ಕಾಸರಗೋಡು, ಪೆರ್ಲ ಕಾಟುಕುಕ್ಕೆ ನಿವಾಸಿ 62 ವರ್ಷದ ಬಿ. ಗೋಪಾಲಕೃಷ್ಣ ಭಟ್ ಅವರು, ತಮ್ಮ 50 ವರ್ಷದ ಪತ್ನಿ ಶ್ರೀಮತಿ ವಿಜಯಲಕ್ಷ್ಮಿ ಕೆ ಅವರ ಚಿಕಿತ್ಸೆಗೆ ಆರ್ಥಿಕ ಸಹಾಯವನ್ನು ಕೋರಿದ್ದಾರೆ.
Story
ಶ್ರೀಮತಿ ವಿಜಯಲಕ್ಷ್ಮಿಯವರು ಕಳೆದ 25 ವರ್ಷಗಳಿಂದ T10 ಮಟ್ಟದ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಪ್ಯಾರಾಪ್ಲೆಜಿಯಾ (ಹೊಕ್ಕುಳ ಕೆಳಗಿನ ಭಾಗದಲ್ಲಿ ಸ್ಪರ್ಶ ಜ್ಞಾನ ಮತ್ತು ಶಕ್ತಿ ಇಲ್ಲ), ಸ್ಪರ್ಶನಷ್ಟ, ಮತ್ತು ಮೂತ್ರಕೋಶ-ಕರುಳಿನ ವಿವಿಧ ಅಂಗಗಳ ನಿಯಂತ್ರಣದ ಕೊರತೆ ಉಂಟಾಗಿದೆ.ಆಕೆ ವೀಲ್ಚೇರ್ನ ಸಹಾಯದಿಂದ ದಿನಚರಿಯನ್ನು ನಿರ್ವಹಿಸುತ್ತಿದ್ದರೂ, ಇತ್ತೀಚೆಗೆ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ, ಪರಿಣಾಮವಾಗಿ ಹಾಸಿಗೆ ಹಿಡಿಯಬೇಕಾದ ಸ್ಥಿತಿ ಬಂದಿದೆ. ಪ್ರಸ್ತುತ, ಕರ್ನಾಟಕದ ಪುತ್ತೂರಿನ ಹಿತಾ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರು ಬಹು ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಗಳು, ಮೂತ್ರನಾಳ ಮತ್ತು ಪೆರಿನಿಯಲ್ ದುರಸ್ತಿ, ಹಾಗೂ ಮೂತ್ರಕೋಶದ ಶಸ್ತ್ರಚಿಕಿತ್ಸೆ ಅವಶ್ಯಕವಿದೆ ಎಂದು ಹೇಳಿದ್ದಾರೆ.ಶ್ರೀ ಗೋಪಾಲಕೃಷ್ಣ ಭಟ್ ಕೃಷಿಕರಾಗಿದ್ದು, ಕಳೆದ 25 ವರ್ಷಗಳಲ್ಲಿ ತಮ್ಮ ಪತ್ನಿಯ ಚಿಕಿತ್ಸೆಗೆ ₹50 ಲಕ್ಷಕ್ಕಿಂತ ಹೆಚ್ಚು ವೆಚ್ಚ ಮಾಡಿದ್ದಾರೆ. ಪತ್ನಿಯ ಎಲ್ಲಾ ದೈನಂದಿನ ಶುಶ್ರೂಷೆಗಳನ್ನು ತಾವೇ ಸ್ವತಹ ನಿರ್ವಹಿಸುತ್ತಾರೆ. ವೈದ್ಯಕೀಯ ಖರ್ಚುಗಳನ್ನು ಭರಿಸಲು ಅವರು ತಮ್ಮ ವೈಯಕ್ತಿಕ ಉಳಿತಾಯ ಮತ್ತು ಸಾಲಗಳನ್ನು ಬಳಸಿಕೊಂಡಿದ್ದಾರೆ. ಆದರೆ, ಈಗ ಆರ್ಥಿಕವಾಗಿ ತುಂಬಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೆಚ್ಚಿನ ಚಿಕಿತ್ಸೆಯನ್ನು ಮುಂದುವರಿಸಲು ₹9,50,000 ಅಗತ್ಯವಿದೆ, ಆದರೆ ಅವರ ಬಳಿ ಇದನ್ನು ಭರಿಸುವ ಸ್ಥಿತಿ ಇಲ್ಲ.ಈ ಸಂಕಷ್ಟ ಸಮಯದಲ್ಲಿ, ಶ್ರೀಮತಿ ವಿಜಯಲಕ್ಷ್ಮಿಯವರಿಗೆ ತುರ್ತು ಚಿಕಿತ್ಸೆ ದೊರಕಿಸಲು ನಿಮ್ಮ ಸಹಾಯ ಅಗತ್ಯವಿದೆ. ದಯವಿಟ್ಟು ನಿಮ್ಮಿಂದ ಸಾಧ್ಯವಿರುವ ಧನ ಸಹಾಯವನ್ನು ನೀಡಿ ಹಾಗೆಯೇ ಇತರರಿಗೂ ಈ ವಿವರಗಳನ್ನು ಶೇರ್ ಮಾಡಿ ಅವರಿಂದಲೂ ಧನ ಸಹಾಯ ನೀಡುವಂತೆ ಮಾಡಿರಿ. ನಿಮ್ಮ ಸಣ್ಣ ನೆರವೂ ವಿಜಯಲಕ್ಷ್ಮಿಯವರ ಬದುಕಿಗೆ ಬೆಳಕಾಗಬಹುದುಇದರೊಂದಿಗೆ ಕೆಲವು ಫೋಟೋಗಳು ಹಾಗೂ ಆಸ್ಪತ್ರೆಯ ಚಿಕಿತ್ಸೆಯ ವಿವರಗಳ ಸರ್ಟಿಫಿಕೇಟ್ ಅನ್ನು ಸೇರಿಸಲಾಗಿದೆ.

₹ 1000.00.